Podcast thumbnail for SatisHFaction
Kannada Podcast from the US

SatisHFaction Kannada Podcast from the US

Claim This Podcast

by Satish Hosanagara

5.0(9 reviews)
93 episodes
Updated Daily
Accepts GuestsHas SponsorsLocation 🇺🇸

Podcast Overview

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

Language

Publishing Since

1/28/2025

1 verified contact email on file for SatisHFaction Kannada Podcast from the US

Pitch yourself as a guest, propose sponsorships, or reach out directly to the host.

Recent Episodes

Episode thumbnail for ಸ್ವದೇಶ - ವಿದೇಶ

April 22, 2026

ಸ್ವದೇಶ - ವಿದೇಶ

ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು.

ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ ಸಂಘದ ಸಮಾರಂಭಕ್ಕೆ ಹೋದಾಗಲೆಲ್ಲ, ಅಲ್ಲಿ ಮಾತಿಗೆ ಸಿಗುತ್ತಿದ್ದ ಹಿರಿಯರು, "ನಾವು ಬಂದು ೨೫ ವರ್ಷಗಳ ಮೇಲಾಯ್ತು..." ಎಂದು ಹೇಳಿದಾಗಲೆಲ್ಲ, ನಮಗೆಲ್ಲ ಆಶ್ಚರ್ಯ, ವಿಸ್ಮಯ, ಜೊತೆಗೆ ಒಂದು ರೀತಿಯ ಗೊಂದಲ ಕೂಡ ಆಗ್ತಾ ಇತ್ತು. ನಮ್ಮ ಜನರೇಶನ್ನಿನವರು ಏನಿದ್ರೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದವರು, ಆದ್ದರಿಂದ ಈ ದೇಶದಲ್ಲಿ ನಾವು ನೋಡಿದ ಕಡಿಮೆ ಹಣ ಎಂದರೆ ಮೂರು ಸಾವಿರ ಡಾಲರುಗಳಷ್ಟು. ಇಲ್ಲಿ ವಿದ್ಯಾರ್ಥಿಗಳಾಗಿ, ವ್ಯಾಸಂಗ ಮತ್ತು ಸಂಶೋಧನೆ ಮಾಡಲು ಬಂದವರ ಹಾಗೆ, ನಾವೇನೂ ಗ್ಯಾಸ್ ಸ್ಟೇಶನ್‌ನಲ್ಲಾಗಲೀ, ಅಂಗಡಿಗಳಲ್ಲಾಗಲೀ ಕೆಲಸ ಮಾಡಿ, ವಾರವಿಡೀ ಬ್ರೆಡ್ ತಿಂದು, ಸೂಪ್ ಕುಡಿದು ಮಲಗಿದ್ದ ಅನುಭವವಂತೂ ನಮ್ಮ ಜನರೇಶನ್ನಿನವರಲ್ಲಿ ಆದದ್ದು ಕಡಿಮೆ ಎನ್ನಬೇಕು.

ಅದೇ ಸಮಯದಲ್ಲಿ, ಇಂಟರ್‌ನೆಟ್ಟಿನ ಮಹಿಮೆಯಿಂದ, ದೂರದ ಭಾರತ, ನಾವು ತೊರೆದು ಬಂದ ನಾಡು ಹತ್ತಿರವಾಗತೊಡಗಿತು. ಮೊದಲೆಲ್ಲ ದುಬಾರಿಯಾಗಿದ್ದ, ಇಂಟರ್‌ನ್ಯಾಶನಲ್ ಕರೆಗಳು, ಈ ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಒಂದು ನಿಮಿಷಕ್ಕೆ ಒಂದು ಡಾಲರಿನ ರೇಟಿನಿಂದ ಸೊನ್ನೆಗೆ ಇಳಿದು ಬಂದಿದೆ. ಫ಼ೋನ್ ಕರೆಗಳಿಗಿಂತ ಮುಂಚೆ ನನ್ನ ತಲೆಮಾರಿನವರಲ್ಲಿ ಕೆಲವರು, ಭಾರತಕ್ಕೆ ಅಮೇರಿಕದಿಂದ ಪತ್ರಗಳನ್ನು ಬರೆದಿದ್ದೇವೆ. ಊರಿನಲ್ಲಿ ಕೆಲವೇ ಕೆಲವು ಜನರ ಮನೆಗಳಲ್ಲಿ ಫ಼ೋನ್ ಸೌಲಭ್ಯ ಇದ್ದ ಕಾಲದಲ್ಲಿ, ನಮ್ಮ ಹತ್ತಿರದವರಿಗೆ, ಸ್ನೇಹಿತರಿಗೆ ನಾವು ಪತ್ರಗಳನ್ನು ಬರೆಯುತ್ತಿದೆವು, ಈಗೆಲ್ಲ ಸ್ನೇಲ್ ಮೇಲ್ ಅಂತಾರಲ್ಲ, ಅದೇ ಆಗ ನಮಗೆ ದೂರದ ಜನರೊಂದಿಗಿನ ಒಡನಾಟಕ್ಕೆ ಒಂದು ಕೊಂಡಿಯಾಗಿದ್ದಿತು. ತರುವಾಯ, ಅಮೇರಿಕದ ನಮ್ಮ ಮನೆ (ಅಪಾರ್ಟ್‌ಮೆಂಟ್) ಫ಼ೋನಿಗೆ, ಇಂಟರ್‌ನ್ಯಾಶನಲ್ ಕರೆ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡು, ನಂತರ ಕಾಲಿಂಗ್ ಕಾರ್ಡ್‌ನಿಂದ ಭಾರತಕ್ಕೆ ಕರೆ ಮಾಡಿ, ನಂತರ ವಾನೇಜ್ ಮೊದಲಾದ ಐ.ಪಿ. ಫ಼ೋನ್‌ಗಳ ಮುಖೇನ ಅನ್‌ಲಿಮಿಟೆಡ್ ಕರೆಗಳನ್ನು ತಿಂಗಳ ನಿಗದಿತ ಬಿಲ್‌ಗೆ ಮಾಡುವಾಗ ನಾವೆಲ್ಲ ಗೆದ್ದೆವು ಅಂದುಕೊಳ್ಳುತ್ತಿದ್ದ ಕಾಲವದು. ಅದರ ತರುವಾಯ, ಸುಮಾರು ೨೦೧೮ರ ಹೊತ್ತಿಗೆ ವಾಟ್ಸ್ಯಾಪ್ ಹಾವಳಿ ಹೆಚ್ಚಾಗಿ, ನಮ್ಮ ಎಲ್ಲ ಕರೆಗಳೂ ಸಂಪೂರ್ಣ "ಉಚಿತ" ಎನ್ನುವ ಕಾಲ ಬರುವಷ್ಟರ ಹೊತ್ತಿಗೆ ಒಂದು ಮಹತ್ತರ ಬದಲಾವಣೆ ಆಗತೊಡಗಿತು.

ನಾವು ದೂರ ಹೋದ ಹಾಗೆಲ್ಲ, ನಮಗೆ ಹತ್ತಿರವಾಗಿದ್ದವರು ದೂರವಾಗ ತೊಡಗಿದರು. ಹಳೆಯ ಬೇರುಗಳು ಕೆಲವು ಕಳಚಿಕೊಂಡು, ಕಣ್ಮರೆಯಾದವು. ಹೊಸ ಚಿಗುರುಗಳು ಹುಟ್ಟಿ ಬೆಳೆದು, ಇಡೀ ಭಾರತವೇ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಬೆಳವಣಿಗೆಯನ್ನು ಸಾಧಿಸತೊಡಗಿತು. ಒಂದು ಕಾಲದಲ್ಲಿ ಎಷ್ಟು ಕರೆಮಾಡಿದರೂ ತೀರದಿದ್ದ ದಾಹ, ಮುಂದೆ ಎಷ್ಟು ಬೇಕಾದರೂ ಕರೆ ಮಾಡಬಹುದು ಎನ್ನುವಷ್ಟರಲ್ಲಿ, ಆ ದಾಹವೇ ಇರದ ಹಾಗಾಗಿದ್ದನ್ನು ಸ್ವಯಂ ಅನುಭವಿಸಿದ ತಲೆಮಾರು ನಮ್ಮದು. ಒಂದು ರೀತಿ, ಹಲ್ಲು-ಕಡಲೆಯ ಸಂಬಂಧದ ಹಾಗೆ.

ಪೌರತ್ವ ಅಥವಾ ಸಿಟಿಜ಼ೆನ್‌ಶಿಪ್ ಅನ್ನೋದು, ನನ್ನ ಪ್ರಕಾರ ಒಂದು ಪಾಸ್‌ಪೋರ್ಟ್ ಬದಲಾಯಿಸಿದಷ್ಟು ಸರಳವಾದದ್ದಲ್ಲ. ಅದರ ಹಿಂದೆ, ಕೇವಲ ಪ್ರಾಕ್ಟಿಕಲ್ ಡಿಸಿಷನ್‌ಗಳು ಮಾತ್ರವಲ್ಲದೇ, ಅನೇಕ ಭಾವನಾತ್ಮಕ ಸಂಬಂಧಗಳೂ ಹಲವಿರುತ್ತವೆ. ನಾವು ಅಮೇರಿಕಕ್ಕೆ ಯಾವುದೇ ದಾರುಣ ಸ್ಥಿತಿಯ ಹಿನ್ನೆಲೆಯಿಂದ ಬಂದವರಲ್ಲ - ನಾವು ಸೈದ್ಧಾಂತಿಕವಾಗಿ ಮುನ್ನಲೆಯಲ್ಲಿದ್ದಾಗಲೇ, ಒಂದು ಕರ್ತವ್ಯ ನಿಮಿತ್ತ ಇಲ್ಲಿಗೆ ಬಂದು, ಇಂದೂ ಸಹ ಆ ಕರ್ಮಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹಾಗಿರುವಾಗ, ಯಾವುದು "ಸ್ವ"ದೇಶ, ಯಾವುದು "ವಿ"ದೇಶ ಎಂದು ಯೋಚಿಸಬೇಕಾದುದು ಗಮನಾರ್ಹ.

ಈ ಅಮೇರಿಕದ ಹಿರಿಮೆಯೇ ಅಂತದು - ಇದೊಂದು ಕನಸುಗಾರರ ದೇಶ, ಇಲ್ಲಿ ಅವಕಾಶಗಳು ವಿಪುಲ, ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೂ ಇಲ್ಲಿ ನ್ಯಾಯ, ನಿಷ್ಠೆ, ಕರ್ತವ್ಯಪರತೆ, ಸ್ವಾಂತಂತ್ರ್ಯ, ಹಾಗೂ ನ್ಯಾಯ ಎಲ್ಲವೂ ಒಂದು ಪಾಲು ಹೆಚ್ಚೇ. ಯಾವುದೇ ಸರ್ಕಾರವಿರಲಿ, ಯಾರೇ ಆಡಳಿತಕ್ಕೆ ಬರಲಿ, ಈ ದೇಶದ ಸಂವಿಧಾನಕ್ಕೆ ಎಲ್ಲರೂ ತಲೆ ತಗ್ಗಿಸಲೇ ಬೇಕು, ಮತ್ತು ಎಲ್ಲರೂ ಸಮಾನರು.

ಆದ್ದರಿಂದ, ಅಮೇರಿಕಕ್ಕೆ ಬಂದ ನಮಗೂ ಹಾಗೂ ಉಳಿದ ದೇಶಗಳಿಗೆ ಹೋದ ಅನಿವಾಸಿ ಭಾರತೀಯರಿಗೂ ಬಹಳಷ್ಟು ವ್ಯತ್ಯಾಸವಿದೆ. ಒಂದೇ ಮಾತಿನಲ್ಲಿ ಹೇಳೋದಾದರೆ, ಇದೇ ಸಂಬಳ-ಸವಲತ್ತುಗಳನ್ನು ಬೇರೆ ಯಾವುದೇ ದೇಶದವರು ಅವರ ಪೌರತ್ವದ ಜೊತೆಗೆ ಉಚಿತವಾಗಿ ಕೊಟ್ಟರೂ ನಾವು ಖಂಡಿತ ಅಲ್ಲಿಗೆ ಹೋಗೋದಿಲ್ಲ!

ಈಗ ಹೇಳಿ, ಯಾವುದು ಪರಕೀಯ, ಯಾವುದು ವಿದೇಶ - ನಾವು ತೂಗುತ್ತಿರುವ ತಕ್ಕಡಿಯಲ್ಲಿ ನಮ್ಮ ಅಮೇರಿಕನ್ ಮೌಲ್ಯಗಳು, ಇಲ್ಲಿನ ಜನ, ನಾಡು-ನುಡಿ, ಸಂಸ್ಕೃತಿ, ಒಡನಾಟಗಳು ಎಲ್ಲವೂ ನಮ್ಮ ಅವಿಭಾಜ್ಯ ಅಂಗಗಳೇ ಆಗಿರುವಾಗ ಇದೇ "ನಮ್ಮ" ದೇಶವಾಗುತ್ತದೆ.

Episode thumbnail for ನಾನೇಕೆ ಓದುತ್ತೇನೆ?

April 1, 2026

ನಾನೇಕೆ ಓದುತ್ತೇನೆ?

ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ.

ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ನೂರು ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಒಂದು ಕಾಲದಲ್ಲಿ ಬರೀ ಪ್ರಿಂಟ್ ಮತ್ತು ರೇಡಿಯೋ ಮಾಧ್ಯಮಕ್ಕೆ ಮೀಸಲಾದ ಜನ ಮತ್ತು ಬರಹಗಾರರು, ನೂರು ವರ್ಷಗಳಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ ಕಂಡುಬರುತ್ತಾರೆ. ಇತ್ತೀಚಿನ ಸೋಶಿಯಲ್ ಮೀಡಿಯಾದಲ್ಲಿ ಮಾನವ ನಿರ್ಮಿತ ಕಂಟೆಂಟ್‌ಗಳನ್ನೂ ಮೀರಿ, ಕೃತಕ ಬುದ್ಧಿಮತ್ತೆಯಿಂದ ತಯಾರಾದ ಕಂಟೆಂಟ್‌ಗಳೂ ಇತ್ತೀಚೆಗೆ ನಮ್ಮ ಸುತ್ತಲೂ ಗಿರಕಿ ಹೊಡೆಯತೊಡಗಿವೆ.

ಒಂದಾನೊಂದು ಕಾಲದಲ್ಲಿ ಪ್ರೊಫ಼ೆಷನಲ್ ಬರಹಾರರು, ಆಸ್ಥಾನ ಪಂಡಿತರು ಮೊದಲಾದ ಮಹಾನ್/ಗಣ್ಯ ವ್ಯಕ್ತಿಗಳು ಮಾತ್ರ ಒಂದು ಪುಸ್ತಕವನ್ನು ಹೊರ ತರಲು ಸಾಧ್ಯವಾಗುತ್ತಿತ್ತು. ಒಂದು ಉನ್ನತ ಮಟ್ಟದ ಜರ್ನಲ್‌ನಲ್ಲಿ ಪಬ್ಲಿಷ್ ಮಾಡಲು ಸಾಧ್ಯವಾಗುತ್ತಿತ್ತು. ಆಗೆಲ್ಲ ೧-೩% ಪ್ರತಿಶತ ಜನ ಬರೆಯುತ್ತಿದ್ದರೆ, ಮಿಕ್ಕವರು, ಅದರಲ್ಲೂ ಅಕ್ಷರಸ್ಥರು ಅದನ್ನು ಬಳಸುತ್ತಿದ್ದರು, ತಮ್ಮ ಮನರಂಜನೆ ಅಥವಾ ತಿಳುವಳಿಕೆಯ ದೃಷ್ಟಿಯಿಂದ. ಆಗ ಬರೆಯುತ್ತಿದ್ದವರ ಸಂಖ್ಯೆಗೆ ಈಗಿನ ಬರೆಯುವವರ ಸಂಖ್ಯೆಯನ್ನು ಹೋಲಿಸಿದಾಗ, ಪ್ರೊಫ಼ೆಷನಲ್ ಬರಹಗಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚುಳವನ್ನು ಕಾಣಬಹುದು.

ಆದರೆ, ಆಗಿನ ಹಾಗೆ, ಈಗಿನ ಬರಹಗಾರರು, ಕಂಟೆಂಟ್ ಕ್ರಿಯೇಟರುಗಳು, ಪೆನ್ನು, ಪೆನ್ಸಿಲ್ ಬಳಸಿ ಪುಸ್ತಕಗಳಲ್ಲಿ ಬರೆಯಬೇಕು ಎಂದೇನೂ ಇಲ್ಲ. ಹೆಚ್ಚಿನ ಬರಹಗಾರರು, ನನ್ನನ್ನೂ ಸೇರಿ, ಇತ್ತೀಚೆಗೆ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ "ಬರೆಯುವ" ಲೇಖಕರಾಗಿರುವುದು ಇತ್ತೀಚಿನ ವಿಶೇಷ. ಯಾವುದೇ ಕೈಬರಹದ ಮ್ಯಾನುಸ್ಕ್ರಿಪ್ಟನ್ನು ನಾವುಗಳು ನೋಡಿಯೇ ಅದೆಷ್ಟೋ ವರ್ಷಗಳಾಗಿವೆ.

ಉದಾಹರಣೆಗೆ ಕನ್ನಡ ಪುಸ್ತಕಗಳ ಪ್ರಕಟಣೆಯ ವಿಚಾರವನ್ನು ಸೂಕ್ಷ್ಮವಾಗಿ ನೋಡಿದಾಗ, ಈ ಎರಡು ಅಂಶಗಳನ್ನು ಗಮನಿಸಬಹುದು:

- ಕಳೆದ ನೂರು ವರ್ಷಗಳಲ್ಲಿ, ಕನ್ನಡದ ೫೦ ಪ್ರತಿಶತ ಟೈಟಲ್‌ಗಳನ್ನು ಪಬ್ಲಿಕ್ ಲೈಬ್ರರಿಗಳಿಗೋಸ್ಕರ ಪ್ರಕಟಿಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ, ಲೇಖಕರು ನೇರವಾಗಿ ತಮ್ಮ ಓದುಗರನ್ನು ತಲುಪುವುದನ್ನು ನೋಡಬಹುದು.

- ಕನ್ನಡದಲ್ಲಿ ಎಲೆಕ್ಟ್ರಾನಿಕ್ ಪುಸ್ತಕ ಮಾಧ್ಯಮ (ಇ-ರೀಡರ್ಸ್) ಅಷ್ಟೊಂದಾಗಿ ಬೆಳೆಯದಿದ್ದರೂ, ಪ್ರತಿಲಿಪಿಯಂತಹ ಪ್ಲಾಟ್‌ಫ಼ಾರ್ಮ್ ಮುಖೇನ ಕಳೆದ ೬ ವರ್ಷಗಳಲ್ಲಿ, ಪಿಡಿಎಫ಼್ ಹಂಚಿಕೊಳ್ಳುವಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

- ದಕ್ಷಿಣ ಭಾರತದಲ್ಲಿ ಖರ್ಚಾಗುವ ಪುಸ್ತಕಗಳಲ್ಲಿ, ಕನ್ನಡ ಪುಸ್ತಕಗಳ ಮಾರುಕಟ್ಟೆ ಸುಮಾರು ೨೫ ಪ್ರತಿಶತ ಇದೆ (ರಾಷ್ಟ್ರಮಟ್ಟದಲ್ಲಿ ಹಿಂದಿಯ ಪುಸ್ತಕಗಳ ಪಾಲು, ಸುಮಾರು ೩೫ ಪ್ರತಿಶತ ಮಾತ್ರ)

- ೨೦೨೬ರಲ್ಲಿ, ಈ ಲೇಖನ ಬರೆಯುವ ಹೊತ್ತಿಗೆ, ಸುಮಾರು ೧೨೦-೧೫೦ ಪುಸ್ತಕಗಳು, ಪ್ರತೀವಾರ ಬಿಡುಗಡೆಗೊಳ್ಳುತ್ತವೆ (ಅನೇಕ ಫ಼ಾರ್ಮ್ಯಾಟುಗಳಲ್ಲಿ)

ಇಷ್ಟೆಲ್ಲ ಪುಸ್ತಕಗಳು ಹೊರಬರುತ್ತಿರುವಾಗ, ನಾವೇಕೆ ಓದುತ್ತೇವೆ ಎಂದು ಕೇಳಿಕೊಳ್ಳುವುದು ಹಾಸ್ಯಾಸ್ಪದವಾಗಿ ಕಂಡುಬರಬಹುದು. ಅದರಲ್ಲೂ, ನಮಗೆ ಬೇಕಾದ ಮಾಹಿತಿ ಎಲ್ಲ ಇಂಗ್ಲೀಷ್ ಮಾಧ್ಯಮದಲ್ಲೇ ಸಿಕ್ಕುತ್ತಿರುವುದಾದರೆ, ನಾವು ಕನ್ನಡ ಪುಸ್ತಕಗಳನ್ನು ಏಕೆ ಓದಬೇಕು? ವರ್ಷಕ್ಕೆ ೭೨೦೦ ಪುಸ್ತಕದಂತೆ ಬಿಡುಗಡೆಯಾಗಿ, ಅಂದರೆ ದಿನಕ್ಕೆ ಸುಮಾರು ೨೦ ಪುಸ್ತಕಗಳ ಬಿಡುಗಡೆಯಾಗುತ್ತಿರುವಾಗ ಅವುಗಳನ್ನು ಕೊಳ್ಳುವವರು ಯಾರು? ಓದುವವರು ಯಾರು?

ನನ್ನ ಪ್ರಕಾರ, ನಾವು ಆಯಾ ವಿಷಯಗಳಿಗೆ ತಕ್ಕಂತೆ, ಆಯಾ ಭಾಷೆಯಲ್ಲಿ ಪುಸ್ತಕವನ್ನು ಓದುವುದು ಸರಿ ಎನಿಸುತ್ತದೆ. ಉದಾಹರಣೆಗೆ, ಆಫ಼ೀಸಿಗೆ ಸಂಬಂಧಿಸಿದ ಲೇವಾದೇವಿ, ಕೆಲಸ ಕಾರ್ಯಗಳನ್ನು ನಾವು ಕನ್ನಡದಲ್ಲಿ ಹೇಗೆ ಊಹಿಸಿಕೊಳ್ಳಲಾರೆವೋ, ಹಾಗೆಯೇ, ನಮ್ಮೂರಿನಲ್ಲಿ ಗಡಚಿಕ್ಕುವಂತೆ ಮಳೆ ಹೊಯ್ಯುವ ಶಬ್ದ, ತದನಂತರ ಮಣ್ಣಿನಿಂದ ಹೊರಬರುವ ಹಿತವಾದ ಪರಿಮಳ ಇವುಗಳನ್ನೂ ಕೂಡ ನಾನು ಇಂಗ್ಲೀಷಿನಲ್ಲಿ ಊಹಿಸಿಕೊಳ್ಳಲಾರೆ.

ನಾನು ಕನ್ನಡದಲ್ಲಿ ಕತೆಗಳನ್ನೋ, ಕಾದಂಬರಿಗಳನ್ನೋ ಓದಿ, ಆಯಾ ಪಾತ್ರಗಳು ಮತ್ತು ಅವುಗಳ ಹಿನ್ನೆಲೆಯಲ ಮಿಳಿತಗೊಂಡು, ಆಯಾ ಪಾತ್ರಗಳ ಸಮಸ್ಯೆ, ಸಂವೇದನೆಗಳು ನಮ್ಮವೇ ಎಂದು ಯೋಚಿಸಿಕೊಳ್ಳುತ್ತೇವಲ್ಲ, ಆ ಭಾಗ್ಯ, ಇಂಗ್ಲೀಷಿನಲ್ಲಿ ಪಾತ್ರಗಳನ್ನು ಅಭ್ಯಾಸ ಮಾಡಿದಾಗ ನಮ್ಮ ಚರ್ಮದ ಕೆಳಗೇ ಇಳಿಯದು ಎನ್ನುವಂತಾಗುತ್ತದೆ. ಬೇಕಾದರೆ, ನೀವು, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕೃತಿಯ ಮೊದಲ ಅಧ್ಯಾಯವನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬೇರೆ ಬೇರೆಯಾಗಿ ಓದಿ ನೋಡಿ. ನಾಯಿ-ಗುತ್ತಿ, ಗುತ್ತಿ-ನಾಯಿ ನಿಮಗೆ ಯಾವ ರೀತಿಯ ಮೋಡಿಯನ್ನು ಮಾಡಬಲ್ಲರು ಎಂದು.

ನಾನು ಏಕೆ ಕನ್ನಡ ಪುಸ್ತಕಗಳನ್ನು ಓದುತ್ತೇನೆಂದರೆ, ಅದರ ಮುಖೇನ, ನಾನು ಅಲ್ಲಿನ ಮಾನವೀಯ ಮೌಲ್ಯ, ಭಾವನೆಗಳ ನಡುವೆ ಒಂದು ಸಂಪರ್ಕಸಾಧಿಸಿಕೊಂಡು, ಅವುಗಳನ್ನು ಅರ್ಥ ಮಾಡಿಕೊಂಡು, ಆಯಾ ಪಾತ್ರಗಳು ನಮ್ಮ ಸ್ನೇಹಿತರೋ, ಬಂಧು-ಮಿತ್ರರೋ ಎಂದು ಯೋಚಿಸುವಂತೆ ಮಾಡುತ್ತವಲ್ಲ? ಆ ಸಮಯವನ್ನು ನಾವು ವ್ಯಯಿಸುವ ಮಟ್ಟಿಗೆ ಅದೊಂದು ಧ್ಯಾನವೇ ಎಂದು ನನ್ನ ನಂಬಿಕೆ. ಜೊತೆಗೆ, ಆಯಾ ಲೇಖಕರ ಸಾಮರ್ಥ್ಯಕ್ಕೆ ತಕ್ಕೆಂತೆ ಅವರ ಉಪಮೆ, ರೂಪಕ, ಉತ್ಪ್ರೇಕ್ಷೆಗಳನ್ನೆಲ್ಲ ಅನುಭವಿಸಿ, ಅವುಗಳನ್ನು ನಮ್ಮ ಮನದಲ್ಲಿ ಪುನರ್‌ಸೃಷ್ಟಿಸಿಕೊಂಡು ಚಪ್ಪರಿಸುತ್ತೇವೆಲ್ಲ, ಅದಕ್ಕಿಂತ ಮಿಗಿಲಾದ ಸಂತೋಷ ಓದುವುದನ್ನು ಬಿಟ್ಟು ಎಲ್ಲಿದೆ ಹೇಳಿ? ಕೊನೆಯದಾಗಿ, ನಾವು ನಮ್ಮೂರಿನ ನೆರೆ-ಹೊರೆ, ಭಾಷೆ-ಬಂಧು, ನೆಂಟರು-ಇಷ್ಟರು ಇವರನ್ನೆಲ್ಲ ಕಳೆದುಕೊಂಡು ದೂರ ಬಂದಿದ್ದೇವೆಲ್ಲ, ನಮಗೆ ಈ ಕನ್ನಡ ಕೃತಿಗಳಲ್ಲದೇ ಮತ್ತಿನ್ಯಾರು ತಾನೆ ಆ ಪರಿಸರವನ್ನು ನಮಗೆ ಕಟ್ಟಿಕೊಡಬಲ್ಲರು?

Episode thumbnail for AI Agents are here? Now What?!

February 25, 2026

AI Agents are here? Now What?!

AI Agents are here? Now What?!

ಆರ್ಟಿಫ಼ಿಷಿಯಲ್ ಇನ್ಟೆಲಿಜೆನ್ಸ್ ಬಂದ್ರೆ, ನಮ್ ಕಥೆ ಏನು?

ಈ ಕೃತಕ ಬುದ್ಧಿಮತ್ತೆಯ ಏಜೆಂಟುಗಳಿಂದ ಮುಂದೆ ನಮಗೆಲ್ಲ ಏನೇನು ಕಾದಿದೆ ಎಂದು ಊಹಿಸಿಕೊಳ್ಳುವ ಚಿತ್ರಣ.

93 total episodes available

Recent guests on SatisHFaction Kannada Podcast from the US

Guests from recent episodes — sign up to see every guest that has ever appeared on this show.

Krupa

Guest

[Guest Name]

Guest

Deep-dive analytics for SatisHFaction Kannada Podcast from the US

Frequently asked questions

Have a different question and can't find the answer you're looking for? Reach out to our support team by sending us an email and we'll get back to you as soon as we can.

What is SatisHFaction Kannada Podcast from the US?

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community.

#NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

How often does this podcast release new episodes?

This podcast updates daily.

Where can I listen to this podcast?

This podcast is available on 4 platforms including Apple Podcasts, Spotify, and more. You can also use the RSS feed directly.

Does this podcast accept guests?

Yes, this podcast regularly features guests.

Legal Disclaimer

Pod Engine is not affiliated with, endorsed by, or officially connected with any of the podcasts displayed on this platform. We operate independently as a podcast discovery and analytics service.

All podcast artwork, thumbnails, and content displayed on this page are the property of their respective owners and are protected by applicable copyright laws. This includes, but is not limited to, podcast cover art, episode artwork, show descriptions, episode titles, transcripts, audio snippets, and any other content originating from the podcast creators or their licensors.

We display this content under fair use principles and/or implied license for the purpose of podcast discovery, information, and commentary. We make no claim of ownership over any podcast content, artwork, or related materials shown on this platform. All trademarks, service marks, and trade names are the property of their respective owners.

While we strive to ensure all content usage is properly authorized, if you are a rights holder and believe your content is being used inappropriately or without proper authorization, please contact us immediately at hey@podengine.ai for prompt review and appropriate action, which may include content removal or proper attribution.

By accessing and using this platform, you acknowledge and agree to respect all applicable copyright laws and intellectual property rights of content owners. Any unauthorized reproduction, distribution, or commercial use of the content displayed on this platform is strictly prohibited.