Podcast thumbnail for Secret of Kannada ಕನ್ನಡದ ಗುಟ್ಟು Kannadada Guttu

Secret of Kannada ಕನ್ನಡದ ಗುಟ್ಟು Kannadada Guttu

Claim This Podcast

by Vishweshwar Dixit

5.0(1 reviews)
90 episodes
Updated Bi-weekly
Accepts GuestsHas SponsorsLocation 🇮🇳

Podcast Overview

Explore varied topics to unlock the secrets of Kannada Language ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ Read at http://kannadakali.com Watch at http://youtube.com/channel/UCCON6n4lEgj6NsPqCLZdDSw Kannada Kali : Kannadada Guttu

Language

Publishing Since

1/11/2020

1 verified contact email on file for Secret of Kannada ಕನ್ನಡದ ಗುಟ್ಟು Kannadada Guttu

Pitch yourself as a guest, propose sponsorships, or reach out directly to the host.

Recent Episodes

Episode thumbnail for ಅರ್ಥದ ಮೊದಲ ಅರ್ಥವೇ ಅರ್ಥ! The First Meaning of Artha is Artha Itself!

January 4, 2026

ಅರ್ಥದ ಮೊದಲ ಅರ್ಥವೇ ಅರ್ಥ! The First Meaning of Artha is Artha Itself!

👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠

📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter

Here, by saying `kuto dhanam', the meaning is meant to be money. So, even for 24 hours ...ChennudiThe first meaning of Artha is meaning!Moment by Moment grain by grainKnowledge and Weatth are to be earned.A grain left is wealth lost;A minute wasted is Knowlede unlearned. - Samayocitapadyamalika (Ka-30)Time (kaala) means passing away; no one can hold it back. But time can be transformed, that is, even a little bit of time can be spent working and earning something useful. That is why Time is Money.Here, by saying `kuto dhanamʼ, the meaning of Artha is money. So, it does not mean that we should spend all 24 hours in the stock market, in interest trading, in moneylending, or in counting the money we have earned.Every moment of life, we gain experiences. Good experiences are the companions of life that stay with us till the end. They are our wealth and meaning. The first meaning of Artha is meaning itself! That is, meaning, hope, and goal. If you want to understand the meaning of life, the ultimate goal, and achieve it, you must engage in good deeds that bring joy and understanding, that are good for yourself and others, and that increase your well-being. You must collect every particle, piece, and fragment of your experiences, squeeze out the essence, gain understanding, and gain knowledge and wealth of Life.This is the inner voice of this Chennudi, and its true meaning.Yours,Vishveshwara Dikshita.The First Meaning of Artha is Meaning Itself!Kannada Kali, Bittarike,January 05, 2026ಇಲ್ಲಿ, ʼಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ...ಚೆನ್ನುಡಿಅರ್ಥದ ಮೊದಲ ಅರ್ಥವೇ ಅರ್ಥ!ಕಣ ಕಣವ ಬಿಡದೆ ಚಣ ಚಣವು ಗಳಿಸು ನೀ ಸಿರಿ ತಿಳಿವುಗಳನು. ಬಿಡಲು ಕಣವೊಂದ ಸಿರಿ ಎಂತು? ಕಳೆಯೆ ಚಣವೊಂದ ಕಲಿವೆಂತು?ಸಂಸ್ಕೃತ ಮೂಲ: ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಂ - ಸಮಯೋಚಿತಪದ್ಯಮಾಲಿಕಾ (ಕ-೩೦)ಸಮಯೋಚಿತಪದ್ಯಮಾಲಿಕೆಯಲ್ಲಿ ಕಕಾರದ ಅಡಿಯಲ್ಲಿ ಬರುವ ೩೦ನೆಯ ಶ್ಲೋಕಒಂದೊಂದು ಚಣವೂ ಶ್ರಮಿಸುತ್ತ, ಒಂದೊಂದು ಚೂರೂ ಬಿಡದೆ, ಕಲಿಕೆ ಮತ್ತು ಸಂಪತ್ತುಗಳನ್ನು ಗಳಿಸಬೇಕು. ಅದನ್ನೆ "ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು" "ತೆನೆ ತೆನೆ ಕೂಡಿದರೆ ರಾಶಿ" ಅಂತ ಕನ್ನಡದ ಗಾದೆಗಳು ಹೇಳುತ್ತವೆ.ಸಮಯ (ಕಾಲ) ಅಂದರೆ ಕಳೆದು ಹೋಗುವುದು ಅಂತಲೇ ಅರ್ಥ; ಅದನ್ನು ಯಾರಿಂದಲೂ ಹಿಡಿದಿಡಲು ಆಗದು.‌ ಆದರೆ ಸಮಯವನ್ನು ರೂಪಾಂತರಿಸಬಹುದು, ಅಂದರೆ ಚಣ ಚಣವೂ ಸಮಯವನ್ನು ಕೆಲಸದಲ್ಲಿ ತೊಡಗಿಸಿ ಉಪಯುಕ್ತವಾದುದನ್ನು ಸಂಪಾದಿಸಬಹುದು. ಅದಕ್ಕೇ Time is Money ಅಂತ.‌ ಇಲ್ಲಿ, ʻಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ಷೇರುಪೇಟೆಯಲ್ಲಿ, ಬಡ್ಡಿ ವ್ಯವಹಾರದಲ್ಲಿ, ಲೇವಾದೇವಿಯಲ್ಲಿ, ಅಥವ ಗಳಿಸಿದ ಹಣವನ್ನು ಎಣಿಸುವುದರಲ್ಲಿ ತೊಡಗಿಸಬೇಕು ಅಂತಲ್ಲ. ಜೀವನದ ಪ್ರತಿ ಕ್ಷಣವೂ ನಾವು ಗಳಿಸುತ್ತಿರುವುದು ಅನುಭವಗಳು. ಒಳ್ಳೆಯ ಅನುಭವಗಳೆ ಕೊನೆಯವರೆಗೂ ನಮ್ಮೊಡನೆ ಇರುವ ಬಾಳ ಸಂಗಾತಿ. ಅವೇ ನಮ್ಮ ಸಂಪತ್ತು ಮತ್ತು ಅರ್ಥ. ಅರ್ಥದ ಮೊದಲ ಅರ್ಥವೇ ಅರ್ಥ! ಅಂದರೆ meaning,ಆಶಯ, ಗುರಿ ಅಂತ. ಬಾಳಿನ ಅರ್ಥ, ಅರ್ಥಾತ ಗುರಿಯನ್ನು ಅರಿತು ಸಾಧಿಬೇಕಾದರೆ ಚಣಚಣವನ್ನೂ ತಿಳಿವನ್ನು ತರುವ, ತನಗೆ ಮತ್ತು ಇತರರಿಗೆ ಒಳ್ಳೆಯದಾಗುವ, ಸೌಖ್ಯವನ್ನು ಹೆಚ್ಚಿಸುವ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಒಂದೊಂದು ಕಣ, ತುಂಡು, ಚೂರು ಅನುಭವಗಳನ್ನೆಲ್ಲ ಸಂಗ್ರಹಿಸಿ, ಸಾರವನ್ನು ಹಿಂಡಿ, ತಿಳಿವನ್ನು ಹೊಂದಿ ಬಾಳಸಿರಿಯನ್ನು ಹೊಂದಬೇಕು. ಇದು ಈ ಚೆನ್ನುಡಿಯ ಒಳದನಿ ಆಗಿದೆ, ನಿಜವಾದ ಅರ್ಥವೂ ಆಗಿದೆ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.ಅರ್ಥದ ಮೊದಲ ಅರ್ಥವೇ ಅರ್ಥ!ಕನ್ನಡ ಕಲಿ, ಬಿತ್ತರಿಕೆ, January 05, 2026

Episode thumbnail for World Philosophy Day Talk ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”

December 25, 2025

World Philosophy Day Talk ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”

👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠⁠

📧 ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠

ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”

ಮೈಸೂರಿನ ಮಾನಸಗಂಗೋತ್ರಿಯ ತತ್ತ್ವಶಾಸ್ತ್ರ ಅಧ್ಯಯನ ಕೇಂದ್ರದವರು, ಸ್ನಾತಕೋತ್ತರ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ “World Philosophy Day-2025” ಪ್ರಯುಕ್ತ

S. G. ಸೀತಾರಾಮ್‍ರವರು ಅಲ್ಲಿ ಮಂಡಿಸಿದ ವಾದದ ಧ್ವನಿ ಪ್ರಸ್ತುತಿ.ಕಂಠದಾನ: Dr. H. ಪಾಂಡುರಂಗ ವಿಠಲ ... ಭರದಿಂದ ಬದಲಾಗುತ್ತಿರುವ ವಿದ್ಯಮಾನಗಳು ಚಿತ್ರ-ವಿಚಿತ್ರ ಸವಾಲುಗಳನ್ನೊಗೆದು, ಒಂದರ ಮೇಲೊಂದು ಆಹ್ವಾನ-ಅವಕಾಶಗಳನ್ನು ’ಉದುರಿಸು’ತ್ತಿರುವ ಈ ಸಂಧಿಯಲ್ಲೂ, ಪ್ರಾಚೀನ ಕಾಲದ, ಪುರಾತನ ಸಮಾಜದ, ಅದರಲ್ಲೂ ಕೆಲವೇ ಆಯ್ದ, ಸೀಮಿತ- ಮತೀಯ, ಪರಸ್ಪರ-ವಿರೋಧಿ ಸಿದ್ಧಾಂತಗಳಷ್ಟನ್ನೇ ಸಾರ್ವತ್ರಿಕ, ಸಾರ್ವಕಾಲಿಕ, ಸತ್ಯಗಳೆಂದೂ, ಅವುಗಳ ಪ್ರವರ್ತಕರ ವಾದಗಳೇ ಪರಮಾರ್ಥಗಳೆಂದೂ, ಭಯ-ಭಕ್ತಿ-ನಿಷ್ಠೆಗಳಿಂದ ತಲೆಬಾಗಿ, ಭೂತಕಾಲಕ್ಕೇ ಜೋತುಬಿದ್ದು, ಇಂದಿಗೂ, ಮುಂದಕ್ಕೂ, ಹಿಂಡಿದ ಹಿಪ್ಪೆಯನ್ನೇ ಚಪ್ಪರಿಸುತ್ತ, ಜಳ್ಳನ್ನೇ ಮತ್ತೆ-ಮತ್ತೆ ಜಗಿದು, ಬಲವಂತವಾಗಿ ನುಂಗಿಕೊಳ್ಳುತ್ತ ಹೋದರೆ, ತತ್ತ್ವವಿಷಯ ವಿಕಾಸಕ್ಕೆ ಪುಷ್ಟಿ ಹೇಗೆ ದೊರೆತೀತು? ...

--- Read the fill article here https://kannadakali.com/article/reflection/nuhorizonsforphilosophy.html

Some “Exciting Horizons” for Contemporary Philosophy A sound presentation of the argument presented by

S. G. Seetharam,

Mysore, at the Department of Postgraduate Philosophy Studies there on the occasion of “World Philosophy Day-2025”.Vocals: Dr. H. Panduranga Vitthal... Even in this era when rapidly changing phenomena are posing strange challenges and ‘throwing’ one invitation and opportunity after another, if we bow our heads out of fear, devotion and loyalty, clinging to the past, considering only the few selected, limited, and contradictory theories of ancient times and ancient societies as universal, eternal, truths, and the arguments of their proponents as the ultimate meanings, and continue to chew the same straw, chewing the same water again and again, and forcibly swallowing it, how can we find nourishment for the development of philosophy? ...

Episode thumbnail for For the sake of Name ಹೆಸರಿಗಾಗಿ Hesarigāgi

December 13, 2025

For the sake of Name ಹೆಸರಿಗಾಗಿ Hesarigāgi

👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠

📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ಹೆಸರಿಗಾಗಿ!ನಿಜ ಜೀವನದ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆಬರೆಹ * ಓದು: ವಿಶ್ವೇಶ್ವರ ದೀಕ್ಷಿತಮರೆಯಲಾಗದ ಕರೆಗಂಟೆ - ನಾನೂ ಅಪ್ಪ ಆಗುವೆ!ನೀರವತೆ ತುಂಬಿದ ಆಫೀಸಿನಲ್ಲಿ ಎಳೆಯುತ್ತಿರುವ ಮಧ್ಯಾಹ್ನದ ಒಂದು ವಿದ್ಯುತ್ ಕ್ಷಣ. ಟಿಣ್ ಟಿಣಿಸುತ್ತಿದ್ದ ದೂರವಾಣಿಯನ್ನು ಎತ್ತಿಕೊಂಡೆ. ಅತ್ತ ನನ್ನ ಹೆಂಡತಿ. ಅವಳ ಮಾತು ಕೇಳಿ ಮೂಕನಾದ ನಾನು ಕೆಲಸದ ಮೇಲೆ ಗಮನ ಇಡಲಾರದಾದೆ. ಎಲ್ಲ ಮೀಟಿಂಗುಗಳನ್ನು ರದ್ದುಗೊಳಿಸಿದೆ. ಹಿಗ್ಗಿನಿಂದ ಎದೆ ಉಬ್ಬಿಸಿ ಗೂಡಿನಿಂದ ಗೂಡಿಗೆ ಹಾರಾಡಿದೆ. ಎಂದಿಗಿಂತ ಹೆಚ್ಚಿನ ನಗುಮೊಗದಿಂದ ಎದುರು ಬಂದವರೆಲ್ಲರ ಕೈ ಕುಲುಕುತ್ತ ಓಡಾಡಿದೆ. ನಾನೂ ಅಪ್ಪ ಆಗುವೆ ಎಂದು ಪುಲಕಿತನಾದೆ.ಸಂಜೆಯ ವೇಳೆಗೆ ಆ ಪುಳಕವೆಲ್ಲ ಮೈ ಇಳಿದು ಪರಿಸ್ಥಿತಿ ಗಂಭೀರವಾಯಿತು. ಹೆಸರು ಬಹಳ ಮಹತ್ವ. ಹೆಸರೊಂದು ಇಡಿ ಜೀವನದ ಗತಿಯನ್ನೆ ನಿರ್ಧರಿಸಿ ಬಿಡಬಹುದು. ಕೂಸಿಗೆ ಏನು ಹೆಸರು ಇಡುವುದು ಎನ್ನುವ ಸರಳ ಪ್ರಶ್ನೆ ದಂಗು ಬಡಿಸಿತು. ಈ ವಿಷಯವನ್ನು ತಪ್ಪಿಯೂ ಕಲಿಸಿರದ ಸಾಲೆಗಳಿಗೆ ಕಾಲು ಹೊಸೆದಿದ್ದು ದಂಡ ಎನಿಸಿತು.ಯೋಜನೆಗಳು[ಇರಲಿ!] ಹೆಸರಿಗಾಗಿ, ಏನ ಕೇನ ಪ್ರಕಾರೇಣ ಎನ್ನುವಂತೆ, ಒಂದು ಯೋಜನೆ ಹಾಕಿದೆ: ಹೆಸರುಗಳ ಪುಸ್ತಕಗಳನ್ನು ಓದುವುದು; ಗೆಳೆಯರನ್ನು, ಹಿರಿಯರನ್ನು, ಮತ್ತಿತರ ಹೆಮ್ಮೆಯ ತಾಯಿತಂದೆಯರನ್ನು ಕೇಳುವುದು; ಇಂಟರ್‌ನೆಟ್ ಮೂಲಕ ಸಿಗಬಹುದಾದ ಮಾಹಿತಿಯನ್ನು ಜಾಲಾಡಿಸಿ ಹೆಸರು ಹುಡುಕುವುದು. ಕವಿರಾಜ ಮಾರ್ಗವನ್ನು ಹಿಡಿದು, ಹರಿಹರನೊಡನೆ ರಗಳೆ ಗೈದು, ನಾಗರಸನನ್ನು ಕೆದಕಿ, ಮುದ್ದಣನೊಡನೆ ಸರಸವಾಡಿ ಸವಿ ಕನ್ನಡ ಹೆಸರೊಂದನ್ನು ಸಂಪಾದಿಸುವುದು. ಒಂದು ಹೆಸರಿಗಾಗಿ, ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಆ ರನ್ನನೊಡನೆ ಗದಾಯುದ್ಧಕ್ಕೆ ಇಳಿಯಲೂ ಸನ್ನದ್ಧನಾದೆ.ಯೋಜನೆ, ಬರಿ ಯೋಜನೆಎಲ್ಲ ಒಳ್ಳೆಯ ಯೋಜನೆಗಳಂತೆ ಇದೂ, ನಿರ್ವಹಿಸದೆ, ಬರಿ ಯೋಜನೆಯಾಗಿಯೆ ಉಳಿಯಿತು. ತಿಂಗಳುಗಳು ಉರುಳಿ ಹೋಗುತ್ತಿರುವಾಗ, ನನ್ನ ಮುಂದೂಡುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕತೆಯ ಸುಲಭ ಸೋಗೊಂದು ಥಟ್ಟನೆ ಬೇಕಾಯಿತು. ಈಗ, ನನಗೆ ಅನುಕೂಲವಾದದ್ದು ಶೇಕ್ಸ್‌ಪಿಯರನ ನಾಟಕೀಯ ಮಾತು, "ಹೆಸರಿನಲ್ಲೇನಿದೆ? ಯಾವುದನ್ನು ಗುಲಾಬಿ ಎಂದು ಕರೆಯುತ್ತೇವೆಯೋ ಅದು ಬೇರೆ ಯಾವುದೇ ಹೆಸರಿನಿಂದಲೂ ಅಷ್ಟೇ ಕಂಪು ಬೀರುತ್ತದೆ!" ಮೇಲಾಗಿ, ಇನ್ನೂ ಏಳು ತಿಂಗಳುಗಳು ಇವೆ! ಸದ್ಯಕ್ಕೆ ಸ್ವಲ್ಪ ಚೇತರಿಸಿಕೊಂಡೆ. ಮಗು ಹುಟ್ಟುವ ಮುಂಚೆ ಸಾವಿರ ಹೆಸರುಗಳನ್ನು ಕಂಡು ಹಿಡಿಯುವೆನೆಂಬ ಆತ್ಮ ವಿಶ್ವಾಸ ಒಮ್ಮೆಲೆ ಬಲವಾಯಿತು.ವಿಶೇಷ ಘಟನೆ ಇಲ್ಲದೆ ಆರು ತಿಂಗಳುಗಳು ಕಳೆದು ಹೋದರೂ ಹೆಸರು ಒಂದೂ ಸಿಕ್ಕಿರಲಿಲ್ಲ. ಯಾವಾಗಲೂ ಹೆಸರಿನ ವಿಚಾರ. ಒಂದು ದಾರಿಯನ್ನೂ ಸರಿಯಾಗಿ ಯೋಚಿಸಿರಲಿಲ್ಲ.ಐಡಿಯ ನಂಬರ್‌ ಒನ್[ಅಹಾ!] ಒಂದು ಐಡಿಯ ಹೊಳೆಯಿತು. ಕೂಸು ನನ್ನೊಬ್ಬನದೇ ಅಲ್ಲ. ಮಗು ಆಗುವುದು ನನ್ನ ಹೆಂಡತಿಗೂ ತಾನೆ? ಹೀಗೆ, ಈ ಹೆಸರಿನ ಹೊಣೆಯಿಂದ ನುಸುಳಿಕೊಳ್ಳುವ ಹವಣಿಕೆಯಲ್ಲಿ ಹಗುರವಾಗಿ ಕೇಳಿದೆ, "ಕೂಸಿಗೆ ಹೆಸರು ಏನಾದರು ಹುಡುಕಿರುವೆಯ?" ಅವಳ ಐಡಿಯ ಬೇರೆಯೆ ಆಗಿತ್ತು. "ಆರೋಗ್ಯವಾದ ಉತ್ತಮ ಮಗು ಹುಟ್ಟುವಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಅಳುಕದೆ ಮುಂದುವರಿಸಿದಳು, "ಕೂಸಿಗೊಂದು ಉತ್ತಮ ಹೆಸರು ನೀವು ನೋಡಿಕೊಳ್ಳಿ." ಈಗ, ಜವಾಬುದಾರಿಯ ಪೆಂಡುಲಂ ಪೂರ್ತಿ ನನ್ನ ಕಡೆಗೆ ವಾಲಿತು. ಗಡಿಯಾಳ ಮಾತ್ರ ಟಿಕ್‌ಟಿಕ್‌ಗುಟ್ಟುತ್ತಲೆ ಇತ್ತು.ಕೊರೆಯುವ ಸಮಸ್ಯೆ – ತಿವಿಯುವ ಗೆಳೆಯರುಈಗಂತು, ಮುದ್ದಾದ ಹೆಸರಿಟ್ಟು ಮಕ್ಕಳ ಜೊತೆ ಆಡುತ್ತಿದ್ದ ಗೆಳೆಯರನ್ನು ಕಂಡರೆ ಮನಸ್ಸಿನಲ್ಲಿ ಏನೋ ಕರಕರೆ. ಕಂಡರೂ ಕಾಣದಂತಿದ್ದ ಇವರು ಸಮಸ್ಯೆಯನ್ನು ನೆನಪಿಸುತ್ತ ನನ್ನ ಸುತ್ತ ತಿರುಗುತ್ತಿದ್ದಾರೆ ಎನ್ನಿಸಿತು.ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿನನ್ನ ಹೆಸರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅದರ ಬೇಕುಬೇಡಗಳನ್ನು ವಿಶ್ಲೇಷಿಸಿ ಎಷ್ಟು ಸಂತೊಷಕೂಟಗಳನ್ನು ಅಂತ್ಯಗೊಳಿಸಿದೆನೋ! ಆಮಂತ್ರಿತ ಮದುವೆಗಳಿಗೆ ಹೋದಾಗ, ವಧೂವರರಿಗೆ ಕಾಣಿಕೆಯೊಂದಿಗೆ "ಕೂಸು ಹುಟ್ಟುವ ಮುಂಚೆ ಕುಲಾವಿ ಎನ್ನುವ ಗಾದೆಯನ್ನು ಮರೆತು ಬಿಡಿ. ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ" ಎಂದು ಮೌನವಾಗಿ ಹರಸಿ ಬರುತ್ತಿದ್ದೆ.ಗಾಂಧಾರಿಯ ಗುಟ್ಟುನೂರೊಂದು ಕೌರವರನ್ನು ಯಾರು ಅರಿಯರು? ಒಂದು ನೂರ ಒಂದು ಹೆಸರುಗಳನ್ನು ಆ ಗಾಂಧಾರಿ ಧೃತರಾಷ್ಟ್ರರು ಹೇಗೆ ಕಂಡು ಹಿಡಿದರು? ಅವರಿಗೇನು ನೂರು ವರ್ಷಗಳ ಸಮಯ ಇರಲಿಲ್ಲ. ಒಮ್ಮೆಲೆ, ಗಾಂಧಾರಿ ಧೃತರಾಷ್ಟ್ರರಿಗಾಗಿ ನನ್ನಲ್ಲಿದ್ದ ಮೆಚ್ಚಿಕೆ ನೂರ್ಮಡಿ ಆಯ್ತು. ಕೌರವರನ್ನು ಹೊತ್ತ ಗಾಂಧಾರಿಗೆ ಅವು ಸಂತಾಪರಹಿತ ದಿನಗಳೇನು ಆಗಿರಲಿಲ್ಲ. ಕತೆ ಕೇಳಿ. ಬೇಗನೆ ಗಂಡು ಮಗು ಆಗಲಿ ಎಂದು ಬೇಡಿಕೊಂಡವಳು ಹೆರಿಗೆಯನ್ನು ಎರಡು ವರ್ಷಗಳ ವರೆಗೆ ತಡೆ ಹಿಡಿದಳು! ಯಾಕೆ ಗೊತ್ತೆ? ಅವಳಿಗೆ ಸರಿಯಾದ ಹೆಸರು ಸಿಕ್ಕಿರಲಿಲ್ಲ! ಬೇಸತ್ತು, ಕೊನೆಗೆ ಭ್ರೂಣವನ್ನೆ ಕಿತ್ತು ಹಾಕಿದಳು ಗಾಂಧಾರಿ! ನೂರು ಮಕ್ಕಳು ಆಗಲಿ ಎಂದ ವ್ಯಾಸನ ವರ ಅವಳಿಗೆ ನೂರಕ್ಕೆ ನೂರರಷ್ಟು ಶಾಪವಾಗಿದ್ದರಲ್ಲಿ ಸಂಶಯವಿಲ್ಲ. ಮಾತು ಕೊಟ್ಟ ವ್ಯಾಸ ಸುಮ್ಮನೆ ಬಿಡಬೇಕಲ್ಲ. ಭ್ರೂಣವನ್ನು ನೂರು ತುಂಡುಗಳಲ್ಲಿ ಕತ್ತರಿಸಿ ಮಣ್ಣಿನ ಕುಡಿಕೆಗಳಲ್ಲಿ ಮುಚ್ಚಿ ಇಟ್ಟ. ಜಾಣ, ಹೆಸರು ಹುಡುಕುವ ಹೆಚ್ಚಿನ ಜವಾಬುದಾರಿಯನ್ನು ಮಾತ್ರ ತಾನು ತೆಗೆದುಕೊಳ್ಳಲಿಲ್ಲ. ಕಣ್ಣು ಕಟ್ಟಿಕೊಂಡ ಗರತಿ ಗಾಂಧಾರಿಗೆ ಎಂತಹ ಶಿಕ್ಷೆ!ಗಾಂಧಾರಿ ಧೃತರಾಷ್ಟ್ರರು ಯಾವ ಕುರು ... --- ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kanadakali.com/experience/hesarigagi.html ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಡಿಸೆಂಬರ್‌ ೩, ೨೦೨೫

90 total episodes available

Deep-dive analytics for Secret of Kannada ಕನ್ನಡದ ಗುಟ್ಟು Kannadada Guttu

Frequently asked questions

Have a different question and can't find the answer you're looking for? Reach out to our support team by sending us an email and we'll get back to you as soon as we can.

What is Secret of Kannada ಕನ್ನಡದ ಗುಟ್ಟು Kannadada Guttu?

Explore varied topics to unlock the secrets of Kannada Language ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ Read at http://kannadakali.com Watch at http://youtube.com/channel/UCCON6n4lEgj6NsPqCLZdDSw Kannada Kali : Kannadada Guttu

How often does this podcast release new episodes?

This podcast updates bi-weekly.

Where can I listen to this podcast?

This podcast is available on 8 platforms including Apple Podcasts, Spotify, and more. You can also use the RSS feed directly.

Does this podcast accept guests?

Information about guest appearances is not available.

Legal Disclaimer

Pod Engine is not affiliated with, endorsed by, or officially connected with any of the podcasts displayed on this platform. We operate independently as a podcast discovery and analytics service.

All podcast artwork, thumbnails, and content displayed on this page are the property of their respective owners and are protected by applicable copyright laws. This includes, but is not limited to, podcast cover art, episode artwork, show descriptions, episode titles, transcripts, audio snippets, and any other content originating from the podcast creators or their licensors.

We display this content under fair use principles and/or implied license for the purpose of podcast discovery, information, and commentary. We make no claim of ownership over any podcast content, artwork, or related materials shown on this platform. All trademarks, service marks, and trade names are the property of their respective owners.

While we strive to ensure all content usage is properly authorized, if you are a rights holder and believe your content is being used inappropriately or without proper authorization, please contact us immediately at hey@podengine.ai for prompt review and appropriate action, which may include content removal or proper attribution.

By accessing and using this platform, you acknowledge and agree to respect all applicable copyright laws and intellectual property rights of content owners. Any unauthorized reproduction, distribution, or commercial use of the content displayed on this platform is strictly prohibited.